ಭೃತ್ಯಾಚಾರ
	ಲಿಂಗಾಯತ ಧರ್ಮದ ಪಂಚಾಚಾರಗಳಲ್ಲಿ ಒಂದು. ಸದಾಚಾರ, ಲಿಂಗಾಚಾರ, ಶಿವಾಚಾರ, ಗಣಾಚಾರ, ಭೃತ್ಯಾಚಾರ ಇವೇ ಆ ಐದು ಆಚಾರಗಳು.ಲಿಂಗಾಯತರು ಭೃತ್ಯಾಚಾರಕ್ಕೆ ಹೆಚ್ಚು ಮಹತ್ತ್ವ ನೀಡಿದ್ದಾರೆ. ಸರ್ವಾಂತರ್ಯಾಮಿಯಾದ ದೇವರು ಎಲ್ಲರ ಹೃದಯಗಳಲ್ಲಿ ಇರುವನೆಂದು ಅರಿತು ಜಗತ್ತನ್ನೇ ಶಿವಶಕ್ತಿಯಿಂದ ಕೂಡಿದ ದೇವಾಲಯ ಎಂದು ಕಾಣುವುದು ಇದರ ತತ್ತ್ವ. ಭೃತ್ಯಾಚಾರಿ ದಾಸೋಹಂಭಾವದಿಂದ ನಿರಹಂಕಾರ ಭಾವದಿಂದ ಎನಗಿಂತ ಕಿರಿಯರಿಲ್ಲ ಶಿವಶರಣರಿಗಿಂತ ಹಿರಿಯರಿಲ್ಲ ಎಂದು ಭಾವಿಸಿ ಭಯಭಕ್ತಿಯಿಂದ ಅವರೊಡನೆ ವ್ಯವಹರಿಸಿ ಎಲ್ಲವನ್ನು ಶಿವಸ್ವರೂಪವೆಂದು ಕಾಣುತ್ತಾನೆ. ಶಿವನಲ್ಲಿಯೂ ಶಿವಶರಣರಲ್ಲಿಯೂ ಕೈಂಕರ್ಯ ಭಾವ ತಳೆದು ನಡೆಯುವುದೇ ಭೃತ್ಯಾಚಾರ.				
	 (ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ